ABOUT US

ಈ ವೆಬ್ ಸೈಟನ್ನು ನಿಮ್ಮ ಮುಂದೆ ತರಲು ನನಗೆ ನಿಜಕ್ಕೂ ತುಂಬಾ ಹೆಮ್ಮೆ ಅನಿಸುತ್ತಿದೆ. ಏಕೆಂದರೆ, ಬಹಳಷ್ಟು ವರುಷಗಳ ನನ್ನ ಆನ್ ಲೈನ್ ನಿಂದ ಹಾಗೂ ದುಬೈ (ಯುಎಇ) ಯಲ್ಲಿ ಸಂಪಾದಿಸಿದ ಟೆಕ್ನಿಕಲ್ ಮಾಹಿತಿಗಳ ಸಂಪತ್ತು ನನ್ನನ್ನು ಒಂದು ಉತ್ತಮವಾದ ಯೂಟ್ಯೂಬ್ ಚಾನೆಲ್, ಮಾಹಿತಿಪೂರ್ಣ ವೆಬ್ ಸೈಟ್, ಹಾಗೂ ಪ್ರತಿಯೊಬ್ಬರಿಗೂ ಅನುಕೂಲವಾಗಬಲ್ಲ ಆನ್ ಲೈನ್ ದುಡಿಮೆಯ ಕುರಿತು ಉತ್ತಮವಾದ ಮಾಹಿತಿಯನ್ನು ಕೊಡಲು ಅನುಕೂಲ ಮಾಡಿದೆ.

ಹಾಗೆಯೇ ಯೂಟ್ಯೂಬ್ ಚಾನೆಲ್ ನಿಂದ ನಾನು ಬಹಳಷ್ಟು ಜನರ ತನಕ ನನ್ನ ಅನಿಸಿಕೆಗಳನ್ನು ಹಾಗೂ ಮಾಹಿತಿಗಳನ್ನು ಕಾಲಕಾಲಕ್ಕೆ ತಲುಪಿಸಲು ಸಹಾಯವಾಗುತ್ತಿದೆ.

ಮುಂದಿನ ದಿನಗಳಲ್ಲಿ ಈ ವೆಬ್ ಸೈಟ್ ನಲ್ಲಿ ಎಲ್ಲಾ ರೀತಿಯ ಟೆಕ್ನಿಕಲ್ ಹಾಗೂ ಆನ್ ಲೈನ್ ದುಡಿಮೆಯ ಕುರಿತು ವೀಡಿಯೋಗಳನ್ನು ಹಾಗೂ ಕೋರ್ಸ್ ಬಗ್ಗೆ ಮಾಹಿತಿಯನ್ನು ನೀವು ನಿರೀಕ್ಷಿಸಬಹುದಾಗಿದೆ.